ಸ್ಪಂದನ

ಿಸರ್ಗದ ರಚನೆಗಳಲ್ಲೆಲ್ಲ ಮಾನವ ದೇಹವು ಅತ್ಯುತ್ತಮವಾದುದೆಂಬುದರಲ್ಲಿ ಸಂದೇಹವೇ ಇಲ್ಲ. ಈ ಮಹಾನ್ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವದೆ ವರ್ಷಾನುಗಟ್ಟಲೆ ಕಾಪಾಡುವುದು ನಮ್ಮದೇ ಜವಾಬ್ದಾರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಬೊಜ್ಜುತನ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಹಾಗೂ ಮಿದುಳಿನ ರಕ್ತನಾಳಗಳ ಕಾಹಿಲೆ, ಕೆಲವು ಬಗೆಯ ಅರ್ಬುದ ರೋಗಗಳು, ಮೂಳೆಸವೆತ ಇವೇ ಮುಂತಾದ ಹಲವಾರು ಸಮಸ್ಯೆಗಳಿಗೆಲ್ಲ ನಮ್ಮ ದೇಹವನ್ನು ನಾವು ವಿಧವಿಧವಾಗಿ ದಂಡಿಸುತ್ತಿರುವುದೇ ಕಾರಣವೆಂದು ಸ್ಪಷ್ಟವಾಗುತ್ತಲಿದೆ. ನಾವು ತಿನ್ನುವ ಆಹಾರ  ಮತ್ತು ನಮ್ಮ ಜೀವನಶೈಲಿಗಳಿಂದಾಗಿ ದೇಹದ ಮೇಲಾಗುವ ದುಷ್ಪರಿಣಾಮಗಳಿಂದಾಗಿಯೇ ಈ ‘ ‘ಆಧುನಿಕತೆಯ ರೋಗಗಳು’ ಉಂಟಾಗುತ್ತವೆಯೆಂದು ಇತ್ತೀಚಿನ ಸಂಶೋಧನೆಗಳಿಂದ ಸಂಶಯಾತೀತವಾಗಿ ಸಾಬೀತಾಗಿದೆ. ಆದ್ದರಿಂದ ನಮ್ಮ ಆಹಾರ ಮತ್ತು ಜೀವನಶೈಲಿಗಳನ್ನು ಸರಿಪಡಿಸಿಕೊಂಡರೆ ಈ ರೋಗಗಳನ್ನು ತಡೆಯಬಹುದು ಅಥವಾ ಸರಿಪಡಿಸಬಹುದು.

ನಮ್ಮ ದೇಹವು ಆಹಾರದಿಂದ ಶಕ್ತಿಯನ್ನು ಗಳಿಸಿ ಅದನ್ನು ಬಳಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ಪ್ರಕ್ರಿಯೆಯನ್ನೇ ಉಪಾಪಚಯ ಎನ್ನುತ್ತೇವೆ. ನಮ್ಮ ದೇಹದ ಆಂತರಿಕ ವ್ಯವಸ್ಥೆಯು ಎಷ್ಟೊಂದು ಸುನಿಯಂತ್ರಿತವೂ, ಸುದೃಢವೂ ಆಗಿದೆಯೆಂದರೆ, ಬಾಹ್ಯ ಜಗತ್ತಿನ ಯಾವುದೇ ಏರುಪೇರುಗಳನ್ನೂ, ಸವಾಲುಗಳನ್ನೂ ಎದುರಿಸಲು ಸರ್ವ ಸನ್ನದ್ಧವೂ, ಸಶಕ್ತವೂ ಆಗಿದೆ. ನಮ್ಮ ಆಹಾರ ಮತ್ತು ಜೀವನಶೈಲಿಗಳು ಈ ಸುವ್ಯವಸ್ಥಿತ ಯಂತ್ರದ ಕೀಲುಗಳನ್ನು ತಪ್ಪಿಸಿ ಮೇಲೆ ಹೇಳಿದ ಎಲ್ಲಾ ರೋಗಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಈ ಎಲ್ಲಾ ರೋಗಗಳನ್ನು ಉಪಾಪಚಯ ಸಂಬಂಧಿ ರೋಗಗಳೆಂದೇ ಹೇಳಬಹುದು.

ಸ್ಪಂದನ ಉಪಾಪಚಯ ವಿಜ್ಞಾನ ಕೇಂದ್ರವು, ಭಾರತದಲ್ಲೇ ಮೊತ್ತಮೊದಲ ಬಾರಿಗೆ, ನಿಮ್ಮ ದೇಹದಲ್ಲಿ ಉಪಾಪಚಯದ ತೊಂದರೆಗಳನ್ನು ಕಂಡುಹಿಡಿಯುವ ಅತ್ಯಾಧುನಿಕ ಸೌಲಭ್ಯಗಳನ್ನು ಮತ್ತು ಅಂತಹವುಗಳೇನಾದರೂ ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಅಥವಾ ಉಲ್ಬಣಿಸದಂತೆ ತಡೆಯಲು ನೆರವಾಗುವ ಆಹಾರಕ್ರಮಗಳು ಮತ್ತು ಜೀವನಶೈಲಿಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶಿಕೆಗಳನ್ನು ಒದಗಿಸುತ್ತದೆ. ಆರೋಗ್ಯ ರಕ್ಷಣೆಯ ಈ ಪರಿರ್ಪೂರ್ಣವಾದ ಹಾಗೂ ನೈಸರ್ಗಿಕವಾದ ವಿಧಾನದಿಂದ ದೇಹದ ಬಗೆಗಿನ ನಿಮ್ಮ ದೃಷ್ಠಿಕೋನವೇ ಬದಲಾಗಲಿದೆ ಹಾಗೂ ನೀವೇ ನಿಮ್ಮ ಆರೋಗ್ಯದ ಸಂಪೂರ್ಣ ರಕ್ಷಕರಾಗಲಿದ್ದೀರಿ! ಈ ವಿಧಾನದ ವಿಶೇಷ ಲಾಭವೆಂದರೆ ನಿಮ್ಮ  ದೇಹತೂಕದಲ್ಲಿ ಆರೋಗ್ಯಕರವಾದ ಇಳಿಕೆಯಾಗುವುದು!

ಸಂಶೋಧನೆಯ ಆಕರಗಳು ಇಲ್ಲಿವೆ